95 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ನೋಟೀಸು

ಬ್ಯಾಂಕಿನ ಇತಿಹಾಸ

ಬ್ಯಾಂಕು ಎಂದೊಡನೆ ಬಡವ, ಬಲ್ಲಿದ, ವರ್ತಕ - ನೌಕರ-ಚಾಕರ, ಪಂಡಿತ-ಪಾಮರರೆಲ್ಲರಿಗೂ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾದ ಅತ್ಯಂತ "ವಿಶ್ವಾಸಾರ್ಹ ಸ್ಥಾನ" ಎಂಬ ಭಾವನೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುವುದು !

ಅದರಲ್ಲೂ ಸಹಕಾರ ತತ್ವದ ತಳಹದಿಯೊಂದಿಗೆ ಸ್ಥಾಪಿತವಾದ ಬ್ಯಾಂಕು ಸಕಲ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಎಲ್ಲರಲ್ಲೂ "ಇದು ನಮ್ಮ ಬ್ಯಾಂಕು" ಎಂಬ ಭಾವನೆಯನ್ನು ಒಡಮೂಡಿಸುತ್ತದೆ. ಅಂಥ ಬ್ಯಾಂಕು ಸರ್ವಜನಾದರಣೀಯವಾಗಿರುವುದು ಇನ್ನೂ ಸಹಜ ! ಅಂಥ ಸ್ಥಾನಮಾನವನ್ನು ಪಡೆದು ಸಹಕಾರಿ ಆಗಸದ ಸುವರ್ಣತಾರೆಯಾಗಿ ಕಂಗೊಳಿಸುತ್ತಿದೆ. ನಮ್ಮ ಶ್ರೀ ಬಸವೇಶ್ವರ ಅರ್ಬನ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್" ಇಂದು ಅದು ಶತಮಾನವನ್ನು ಪೂರೈಸಲು ಮುನ್ನಡಿಯತ್ತಿರುವ ನಮ್ಮ ಬ್ಯಾಂಕು ನಮ್ಮ ನಗರದ ನಾಗರಿಕರಿಗೆ ನಂಬುಗೆಗೆ ಪಾತ್ರವಾದುದರ ಸಂಕೇತವಾಗಿದೆ. ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ, ಪರಿಶ್ರಮ ಪ್ರಾಮಾಣಿಕ ಪ್ರಯತ್ನಗಳೇ ಕಾರಣವೆಂಬದು ನಿತ್ಯ ಸತ್ಯ ಸಂಗತಿ! ಈ ಮಾತು ನಮ್ಮ ಬ್ಯಾಂಕಿಗೆ ಅನ್ವಯಿಸುತ್ತದೆ.

ಮತ್ತಷ್ಟು ಓದು

ಸ್ಥಾಪಕ

ಶ್ರೀ ಕೊಟ್ರಬಸಪ್ಪ ದೊಡ್ಡಕೊಟ್ರಪ್ಪ ಬಣಗಾರ