ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೆ 95 ವರ್ಷಗಳ ಸಾರ್ಥಕ ಸೇವೆಯಲ್ಲಿ ತೊಡಗಿಸಿಕೂಂಡ ಎಲ್ಲ ಆಡಳಿತ ಸಮಿತಿ ಸದಸ್ಯರು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ, ಪಿಗ್ಮಿ ಏಜೆಂಟರು, ಇದಕ್ಕಿಂತ ಹೆಚ್ಚಾಗಿ ಈ ದಾರಿಯಲ್ಲಿ ಸ್ಪಂದಿಸಿದ ಗ್ರಾಹಕರಿಂದ ಬ್ಯಾಂಕು ಶತಮಾನೋತ್ಸವದತ್ತ ಮುನ್ನುಗ್ಗುತ್ತಿದೆ.
ಇನ್ನು ಮುಂದೆ ಬ್ಯಾಂಕಿನ ಗ್ರಾಹಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿ ನಗರದ ಬೇರೆ ಭಾಗಗಳಲ್ಲಿ ಹೊಸ ಶಾಖೆ ಆರಂಭಿಸುವ ಉದ್ದೇಶವಿದೆ. ನಮ್ಮ ಗ್ರಾಹಕರಿಗೆ ರುಪೇ ಡೆಬಿಟ್ ಕಾರ್ಡನ್ನು ಮತ್ತು ಎಟಿಎಂ ಸೌಲಭ್ಯ ಒದಗಿಸುವುದು.
ಬ್ಯಾಂಕಿನ ಉತ್ತಮ ಸಾಧನೆಗೆ ಬ್ಯಾಂಕಿನ ಷೇರುದಾರರು, ಗ್ರಾಹಕರು, ಮತ್ತು ಬ್ಯಾಂಕಿನ ಸಿಬ್ಬಂದಿಗಳ ಅವಿರತ ಪರಶ್ರಮವೇ ಕಾರಣ. ಬ್ಯಾಂಕು ನೀಡುತ್ತಿರುವ ಆಧುನಿಕ ಸೇವೆಗಳನ್ನು ಬ್ಯಾಂಕಿನ ಗ್ರಾಹಕರು ಪಡೆದುಕೂಂಡು ಬ್ಯಾಂಕು ಇನ್ನೂ ಹೆಚ್ಚಿನ ಉನ್ನತಿಯನ್ನು ಹೂಂದಿ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವಲ್ಲಿ ಸಫಲವಾಗಲೆಂದು ಆಶಿಸುತ್ತೇನೆ.
ಇಂತಿ ತಮ್ಮ
ಚನ್ನವೀರಪ್ಪ ರು ಅಸುಂಡಿ
ಅಧ್ಯಕ್ಷರು.