ಬ್ಯಾಂಕು ಎಂದೊಡನೆ ಬಡವ, ಬಲ್ಲಿದ, ವರ್ತಕ - ನೌಕರ-ಚಾಕರ, ಪಂಡಿತ-ಪಾಮರರೆಲ್ಲರಿಗೂ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾದ ಅತ್ಯಂತ "ವಿಶ್ವಾಸಾರ್ಹ ಸ್ಥಾನ" ಎಂಬ ಭಾವನೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುವುದು ! ಅದರಲ್ಲೂ ಸಹಕಾರ ತತ್ವದ ತಳಹದಿಯೊಂದಿಗೆ ಸ್ಥಾಪಿತವಾದ ಬ್ಯಾಂಕು ಸಕಲ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಎಲ್ಲರಲ್ಲೂ "ಇದು ನಮ್ಮ ಬ್ಯಾಂಕು" ಎಂಬ ಭಾವನೆಯನ್ನು ಒಡಮೂಡಿಸುತ್ತದೆ. ಅಂಥ ಬ್ಯಾಂಕನ್ನು ಕಟ್ಟಿದವರು, ಕಟ್ಟಿ ಬೆಳಸಿದವರು ಜನಪ್ರಿಯ ಮುಂದಾಳುಗಳಾಗಿದ್ದರಂತೂ ಅಂಥ ಬ್ಯಾಂಕು ಸರ್ವಜನಾದರಣೀಯವಾಗಿರುವುದು ಇನ್ನೂ ಸಹಜ! ಅಂಥ ಸ್ಥಾನಮಾನವನ್ನು ಪಡೆದು ಸಹಕಾರಿ ಆಗಸದ ಸುವರ್ಣತಾರೆಯಾಗಿ ಕಂಗೊಳಿಸುತ್ತಿದೆ.
ನಮ್ಮ "ಶ್ರೀ ಬಸವೇಶ್ವರ ಅರ್ಬನ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್" ಇಂದು ಅದು ಶತಮಾನವನ್ನು ಪೂರೈಸಲು ಮುನ್ನಡಿಯತ್ತಿರುವ ನಮ್ಮ ಬ್ಯಾಂಕು ನಮ್ಮ ನಗರದ ನಾಗರಿಕರಿಗೆ ನಂಬುಗೆಗೆ ಪಾತ್ರವಾದುದರ ಸಂಕೇತವಾಗಿದೆ.
ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ, ಪರಿಶ್ರಮ ಪ್ರಾಮಾಣಿಕ ಪ್ರಯತ್ನಗಳೇ ಕಾರಣವೆಂಬದು ನಿತ್ಯ ಸತ್ಯ ಸಂಗತಿ! ಈ ಮಾತು ನಮ್ಮ ಬ್ಯಾಂಕಿಗೆ ಅನ್ವಯಿಸುತ್ತದೆ. ಅದರಲ್ಲೂ ಒಬ್ಬ ವ್ಯಕ್ತಿ ಪ್ರೇರಕ ಶಕ್ತಿಯಾಗಿ ಮುಂದೆ ಬಂದಾಗಲೇ ಸತ್ಕಾರ್ಯಗಳು ಕಾರ್ಯ ರೂಪದಲ್ಲಿ ಬರುತ್ತವೆ. ನಮ್ಮ ಬ್ಯಾಂಕಿನ ಪ್ರೇರಕ ಶಕ್ತಿಯಾಗಿ ಮುಂದೆ ಬಂದವರು ಶ್ರೀ ಪುಟ್ಟರಾಜ ಒಡೆಯರ ಅವರು ಜಿಲ್ಲಾ ಸಹಕಾರಿ ಗೌರವ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಸಹಕಾರದೂಂದಿಗೆ ನಮ್ಮ ನಗರದ ಪ್ರಮುಖ ವ್ಯಕ್ತಿಗಳೂ ಅಗರ್ಭ ಶ್ರೀಮಂತರೂ ಆದ ಶ್ರೀ ಕೊಟ್ರಬಸಪ್ಪ ದೊಡ್ಡಕೊಟ್ರಪ್ಪ ಬಣಗಾರ ಅವರು ಮುಖ್ಯ ಪ್ರವರ್ತಕರಾಗಿ ಮುಂದಾಳತ್ವ ವಹಿಸಿದರು. ಸಹಕಾರ ತಳಹದಿಯ ಮೇಲೆ ಬ್ಯಾಂಕೊಂದನ್ನು ಸ್ಥಾಪಿಸಲು ಸನ್ನದ್ದರಾದರು.! ಅವರಿಗೆ ಸಹಾಯಕರಾಗಿ, ಸಹಕಾರಿಗಳಾಗಿ ಮುಂದೆ ಬಂದವರು ನಗರದ ಗಣ್ಯವ್ಯಕ್ತಿಗಳಾದ,
ಶ್ರೀ ಪುಟ್ಟರಾಜ ಒಡೆಯರ ಅವರ ಸಂಕಲ್ಪವು ಶ್ರೀ ಬಣಗಾರ ಸಾವುಕಾರ ಹಾಗೂ ಅವರ ಸಂಗಡಿಗರ ಬೆಂಬಲದಿಂದ 1924 ನೇಯ ಮಾರ್ಚ 7 ನೇ ತಾರೀಖನ ಶುಭ ದಿನದಂದು ಬ್ಯಾಂಕಿನ ಪ್ರಾರಂಭೋತ್ಸವವನ್ನು ನೇರವೇರಿಸಬೇಕೆಂದು ನಿರ್ಧರಿಸಲಾಯಿತು. ಆದರೆ 'ಬ್ಯಾಂಕಿನ ಹೆಸರೇನು'? ಎಂಬ ಪ್ರಶ್ನೆ ಅಂದಿನ ಆ ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟತು. ಅನೇಕ ಹೆಸರುಗಳು ಸೂಚಿತವಾದವು. ಬಹು ಜನ ಸಭಿಕರು ಶ್ರೀ ಬಸವೇಶ್ವರರ ಹೆಸರನ್ನು ಬ್ಯಾಂಕಿಗೆ ಇಡಬೇಕೆಂದು ಅಭಿಪ್ರಾಯ ಪಟ್ಟರು. ಅದಕ್ಕೆ ಮುಖ್ಯವಾದ ಕಾರಣಗಳು ಎರಡು ಮೊದಲನೇಯದಾಗಿ 12 ನೇ ಶತಮಾನದಲ್ಲಿ ಕ್ರಾಂತಿಯ ಕಹಳೆಯನ್ನೂದಿ ಕಾಯಕದ ಮಹತಿಯನ್ನು ಮಾತು ಕೃತಿಗಳಿಂದ ಸಿದ್ದಪಡಿಸಿದ ಮಹಾತ್ಮರು ! ಎಂಟನೂರು ವರುಷಗಳ ಹಿಂದೆ ಆರ್ಥಿಕ ಸಮಾನತೆಯನ್ನು ಜನತೆಯಲ್ಲಿ ತರಲು ಹೆಣಗಿದವರು ಮಹಾನುಭಾವ ಬಸವಣ್ಣನರು. "ಕಾಯಕವೇ ಕೈಲಾಸ" ವೆಂಬುದು ಅವರ ದಿವ್ಯ ಮಂತ್ರ ! ಅದುವೇ ಅವರ ಜೀವನದ ಉಸಿರು ! ದುಡಿಯಲಾರದವನಿಗೆ ಉಣ್ಣುವ ಅಧಿಕಾರವಿಲ್ಲ. ದುಡಿದು ಉಣ್ಣುಬೇಕಾದದು ಒಡಲು ಧರಿಸಿದ ಪ್ರತಿಯೊಬ್ಬ ಜೀವಿಯ ಕರ್ತವ್ಯವೆಂಬುದನ್ನೂ ಜೀವನದುದ್ದಕ್ಕೂ ಆಚರಿಸಿ ತೋರಿಸಿzವÀರು- ಬಸವಣ್ಣನವರು.
ಎರಡನೆಯದಾಗಿ ರಾಣೇಬೆನ್ನೂರು ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರರ ದೇವಸ್ಥಾನವು ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ. ನಗರದ ಭಾವುಕ ಭಕ್ತರ ಆರಾಧ್ಯ ದೈವ ಈ ಮಂದಿರದ ಬಸವಣ್ಣನು ಪೂಜನೀಯ ದೇವರಾಗಿ ಕಂಗೊಳಿಸುತ್ತಿದ್ದಾನೆ. ಈ ಹಿನ್ನಲೆಯಲ್ಲಿ ಅಂದಿನ ಆ ಸಭೆಯ ಪ್ರಮುಖರು "ಶ್ರೀ ಬಸವೇಶ್ವರ ಅರ್ಬನ ಕೋ-ಆಫರೇಟಿವ್ ಬ್ಯಾಂಕ್ ಲಿಮಿಟೆಡ್" ಎಂದು ನಾಮಕರಣಮಾಡಿ ತಾರೀಖು 07-03-1924 ರಂದು ಪ್ರಾರಂಭವಾಯಿತು.
ನಮ್ಮ ಬ್ಯಾಂಕು ಪ್ರಾರಂಬವಾದುದು ಕೇವಲ ಹನ್ನೇರಡು ಜನ ಶೇರುದಾರರ (ಭಾಗೀದಾರರ) ಸುಮಾರು ಐದು ಸಾವಿರ ರೂಪಾಯಿಗಳ ( ರೂ. 5,000-00 ) ದುಡಿಯುವ ಬಂಡವಾಳದಿಂದ. ಬ್ಯಾಂಕಿನ ಸ್ಥಾಪನಾ ಅಧ್ಯಕ್ಷರಾಗುವ ಭಾಗ್ಯ ನಗರದ ಜನಪ್ರಿಯ, ಶ್ರೀಮಂತರೂ ಆಗಿದ್ದ ಶ್ರೀ ಕೊಟ್ರಬಸಪ್ಪ ದೊಡ್ಡಕೊಟ್ರಪ್ಪ ಬಣಗಾರ ಅವರದ್ದಾಗಿತ್ತು. ! ಅಂದಿನಿಂದ ಬ್ಯಾಂಕು ಪ್ರಗತಿ ಪಥದತ್ತ ಮುನ್ನಡೆಯತೊಡಗಿತು. ಪ್ರಪ್ರಥಮ ಕಾರ್ಯದರ್ಶಿಯಾಗಿ ಶ್ರೀ ಗೋಮಣಸಾ ಕಾಟವೆ ಇವರು ಬ್ಯಾಂಕಿನ ಪ್ರಗತಿಗೆ ಸಹಾಯಕರಾದರು. ಮಾತೆ ಮಗುವನ್ನು ಎದೆಗವಚಿಕೂಂಡು ಮುದ್ದಾಡಿ ಬೆಳೆಸುವಂತೆ ಶ್ರೀ ಬಸವೇಶ್ವರ ಅರ್ಬನ್ ಕೋ-ಆಫರೇಟಿವ್ ಬ್ಯಾಂಕ ಲಿಮಿಟೆಡ್ ಅನ್ನು ಎರಡು ವರ್ಷಗಳವರೆಗೆ ಅತ್ಯಂತ ಪ್ರೀತಿ ವಿಶ್ವಾಸದಿಂದ ಪರಿಶ್ರಮ, ದಕ್ಷತೆಯಿಂದ ಬೆಳೆಸಿದ ಶ್ರೀ ಬಣಗಾರ ಸಾವುಕಾರರು ಬ್ಯಾಂಕಿನ ಆಡಳಿತ ಹೂಣೆಯನ್ನು ಸ್ನೇಹಿತರಾದ ಶ್ರೀ ಕೊಟ್ರಪ್ಪ ಕೊಟ್ರಬಸಪ್ಪ ಆನಿಶೆಟ್ಟರ, ಶ್ರೀ ಬಸಪ್ಪ ಮಹಲಿಂಗಪ್ಪ ಅಂಕಲಕೋಟೆ, ಹಾಗೂ ಶ್ರೀ ಶಂಕರಪ್ಪ ವೀರಬಸಪ್ಪ ಸೂರಣಗಿ ಅವರಿಗೆ ಒಪ್ಪಿಸಿದರು. ಅವರು ಸಹ ಅತ್ಯಂತ ಎಚ್ಚರಿಕೆಯಿಂದ ಹಾಗೂ ದಕ್ಷತೆಯಿಂದ ಈ ಬ್ಯಾಂಕನ್ನು ಮುನ್ನಡೆಸಿದರು. ಸದಸ್ಯರ ಸಂಖ್ಯೆ ಹಾಗೂ ದುಡಿಯುವ ಬಂಡವಾಳ ಸಹ ಹೆಚ್ಚಿದ್ದಲ್ಲದೆ ಇವರು ತಮ್ಮ ದಕ್ಷತೆ ಪ್ರಾಮಾಣಿಕತೆಗಳಿಂದ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಕಾರಣೀಭೂತರಾದರು.
1929 ರಿಂದ 1944 ರವರೆಗೆ, ಶ್ರೀಮಾನ್ ಸಿದ್ದಪ್ಪ ಬಸಪ್ಪ ಬಣಗಾರ ಇವರು ನಗರ ಸಭೆಯ ಅಧ್ಯಕರು ಹಾಗೂ ಇತರೇ ಸಂಘ ಸಂಸ್ಥೆಗಳ ಸದಸ್ಯರು ನಿರ್ದೇಶಕರು ಆಗಿದ್ದರು. ಅವರ ಅಧ್ಯಕ್ಷತೆಯಲ್ಲಿ ಸದಸ್ಯರ ಸಂಖ್ಯೆ 200 ಗಡಿ ದಾಟಿತು. ದುಡಿಯುವ ಬಂಡವಾಳವು, ಶೇರು ನಿಧಿ, ಸ್ವಂತ ಬಂಡವಾಳವು ದೂಡ್ಡ ಮೊತ್ತಕ್ಕೆ ಏರಿದವು. ಹಾಗೂ ಆ ವೇಳೆಗೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಸದಾಶಿವಯ್ಯ ಬಸವಣ್ಣೆಯ್ಯ ಷಡಕ್ಷರಿಮಠ ಕಾರ್ಯ ತತ್ಪರತೆಯಿಂದಾಗಿ ಬ್ಯಾಂಕಿನ ವ್ಯವಹಾರವು ವೃದ್ದಿಸಿತು. ಬ್ಯಾಂಕಿನ ಜನಪ್ರಿಯತೆ ಹೆಚ್ಚಿಸಲು ಅಧ್ಯಕ್ಷರು – ಕಾರ್ಯದರ್ಶಿಗಳ ಜೋಡಿ ಕಾರಣೀಭೂತವಾಯಿತೆಂದರೆ ತಪ್ಪಾಗಲಿಕ್ಕಿಲ್ಲ. ಆಗಲೇ ಬ್ಯಾಂಕಿಗೊಂದು ಸ್ವತಂತ್ರ ಕಟ್ಟಡ ಇರಬೇಕೆಂದು ಮುಂದಾಲೋಚನೆಯನ್ನು ಹೊಂದಿದ ಶ್ರೀ ಬಣಗಾರ ಇವರು ಪ್ರತಿ ವರ್ಷವೂ ಕಟ್ಟಡ ನಿಧಿಯನ್ನು ಕಟ್ಟಡಕ್ಕಾಗಿ ಸಂಗ್ರಹಿಸ ತೊಡಗಿದರು. ನಂತರ ಬ್ಯಾಂಕು ತನ್ನ ಕಾಲ ಮೇಲೆ ತಾನು ನಿಲ್ಲುವ ಸದೃಢ ಸ್ಥಿತಿಗೆ ತಲುಪಿತು.
ಇಪ್ಪತ್ತರ ಹರೆಯದ ಬ್ಯಾಂಕಿನ ಆಡಳಿತವನ್ನು ಶ್ರೀ ಸಿದ್ದಪ್ಪ ಬಣಗಾರ ಇವರು ಶ್ರೀ ಚನ್ನಬಸಪ್ಪ ಸಂಗಪ್ಪ ಕುರುವತ್ತಿ ಅವರಿಗೆ ವಹಿಸಿಕೂಟ್ಟು ಅವರಿಗೆ ಬೆಂಬಲಿಗರಾಗಿ, ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸತೊಡಗಿದರು. ಅನಂತರ ಶ್ರೀ ಚನ್ನಬಸಪ್ಪ ಚನ್ನವೀರಪ್ಪ ಪಟ್ಟಣಶೆಟ್ಟಿ ಅವರು ಸುಮಾರು 9 ವರ್ಷ ಗಳವರೆಗೆ ಅವ್ಯಾಹತವಾಗಿ ಅತ್ಯಂತ ದಕ್ಷತೆಯಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬ್ಯಾಂಕಿನ ಘನತೆ-ಗೌರವಗಳನ್ನು ಕಾಪಾಡಿಕೊಂಡು ಹಾಗೂ ಬ್ಯಾಂಕಿನ ಅಭಿವೃದ್ದಿಗೆ ಕಾರಣೀಭೂತರಾದರು. ಈ ತೆರನಾಗಿ ನಮ್ಮ ಬ್ಯಾಂಕು ಸುಮಾರು 30 ವರ್ಷಗಳ ಆಯುಷ್ಯವನ್ನು ನಗರದ ಜನತೆಯ ಸೇವೆಯಲ್ಲಿ ಕಳೆಯಿತು.
ದಿನಾಂಕ 11-09-1954 ರಂದು ಬ್ಯಾಂಕಿಗಿಂತ ಸುಮಾರು 10 ವರ್ಷ ವಯಸ್ಸಿನಲ್ಲಿ ಹಿರಿಯರಾದ, ಸಹಕಾರಿ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಉತ್ಸಾಹಿ ಸಮಾಜಿಕ ಕಾರ್ಯಕರ್ತರೂ, ಗಣ್ಯ ವರ್ತಕರು, ನಗರ ಸಭಾ ಸದಸ್ಯರಾದ ಶ್ರೀ ಈಶ್ವರಪ್ಪ ಚನ್ನಬಸಪ್ಪ ಉಪ್ಪಿನ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕಿನ ಆಡಳಿತ ಹೂಣೆ ಹೊತ್ತು ಕೂಂಡರು. ಇವರು ಸತತವಾಗಿ 21 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರ ಅಧಿಕಾರದ ಅವಧಿಯಲ್ಲಿ ಸದಸ್ಯರ ಸಂಖ್ಯೆ 200 ಇದ್ದದ್ದು 400 ಕ್ಕೆ ಏರಿತು. ಮತ್ತು ರಿಸರ್ವ ಫಂಡ್ ರೂಪಾಯಿ 2 ಲಕ್ಷಗಳಾದರೆ ದುಡಿಯುವ ಬಂಡವಾಳವು ಸುಮಾರು ರೂಪಾಯಿ 8 ಲಕ್ಷಗಳಾಯಿತು. ಈ ಸಂಖ್ಯೆಗಳು ಬ್ಯಾಂಕಿನ ಪ್ರಗತಿಯ ಪ್ರತೀಕವಾಗಿದೆ.
ದಿನಾಂಕ 02/10/1975 ರಿಂದ ಬ್ಯಾಂಕಿನ ಆಧ್ಯಕ್ಷರಾಗಿ ಶ್ರೀ ವಾಗೀಶ ಉಪ್ಪಿನ ಇವರು ಕಾರ್ಯ ನಿರ್ವಹಿಸಿದರು. ಇವರ ಅವಧಿಯಲ್ಲಿ ಬ್ಯಾಂಕು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು.
ಬ್ಯಾಂಕು ಆರಂಭದ ಸುಮಾರು 38 ವರ್ಷಗಳನ್ನು ದೊಡ್ಡಪೇಟೆಯಲ್ಲಿರುವ ಶ್ರೀ ಬಣಗಾರ ಅವರ ಕಟ್ಟಡದಲ್ಲಿ ಕಳೆಯಿತು. ಬ್ಯಾಂಕಿಗೆ ತನ್ನದೇ ಆದ ಕಟ್ಟಡ ಅವಶ್ಯವೆಂದು ನಿರ್ಧರಿಸಿದ ಅಧ್ಯಕ್ಷರಾದ ಶ್ರೀ ಈಶ್ವರಪ್ಪ ಉಪ್ಪಿನ ಹಾಗೂ ಅವರ ಸಹಕಾರಿಗಳು 1961 ರಲ್ಲಿಯೇ ಸುಮಾರು ರೂಪಾಯಿ 41,000 ಮೊತ್ತದ ಕಟ್ಟಡ ಕಟ್ಟಿಸುವ ಯೋಜನೆ ಹಾಕಿ ಕೂಂಡರು. ಅದರ ಶಿಲಾನ್ಯಾಸವನ್ನು ದಿನಾಂಕ 24-09-1961 ರ ಶುಭ ದಿನದಂದು ಆಗಿನ ಮೈಸೂರು ರಾಜ್ಯದ ಅಹಾರ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಕೆ.ಎಫ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ, ಹಾಗೂ ಸಹಕಾರಿ ಸಚಿವರಾಗಿದ್ದ ಮಾಲಿ ಮರಿಯಪ್ಪನವರು ಶಿಲನ್ಯಾಸ ನೇರವೇರಿಸಿದರು. ಕೈಕೂಂಡ ಕಾರ್ಯವು ಶ್ರೀ ಈಶ್ವರಪ್ಪ ಉಪ್ಪಿನ ವಿಶ್ರಾಂತಿಯನ್ನು ಬಯಸದೆ ಮೇಲ್ವಿಚಾರಣೆಯಿಂದಾಗಿ ಕೇವಲ 2 ವರ್ಷಗಳಲ್ಲಿ ಭವ್ಯವಾದ ಆರ್ ಸಿ ಸಿ ಕಟ್ಟಡವೊಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಮಾರ್ಕೆಟ್ ಯಾರ್ಡ) ನಲ್ಲಿ ತನ್ನದೇ ಆದ ಕಟ್ಟಡವನ್ನು ದಿನಾಂಕ 25-07-1963 ರಂದು ರಾಜ್ಯದ ಸಹಕಾರಿ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದ ಶ್ರೀ ಆರ್. ಭರಣಯ್ಯ ಐ.ಎ.ಎಸ್ ಅವರು ಉದ್ಘಾಟಿಸಿದರು. ಹಾಗೂ ಕ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ. ವ್ಹಿ.ಎಸ್. ಬಸವನಾಳ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 56 ವರುಷ ಕಳೆದರೂ ಅನೇಕ ಅರ್ಬನ್ ಬ್ಯಾಂಕುಗಳು ಸ್ವಂತ ಕಟ್ಟಡ ಹೂಂದಿರದ ಪರಿಸ್ಥಿತಿ ಇರುವಾಗ ನಮ್ಮ ಬ್ಯಾಂಕು ಭವ್ಯವಾದ ಕಟ್ಟಡದೂಂದಿಗೆ ನೆಲಮಾಳಿಗೆಯಲ್ಲಿ ತನ್ನದೇ ಆದ ಭದ್ರವಾದ ಕೋಣೆ (ಲಾಕರ್) ವ್ಯವಸ್ಥೆಯನ್ನು ಹೊಂದಿದ ಪ್ರಾಶ್ಯಸ್ತ್ಯವನ್ನು ಪಡೆದಿದೆ ಎಂಬುದು ನಿಜಕ್ಕೂ ಅಭಿಮಾನದ ಸಂಗತಿ.
ಹೊಸ ಕಟ್ಟಡ ನಿರ್ಮಾಣಗೊಂಡ ನಂತರ ಅಧ್ಯಕರುಗಳಾದ ಶ್ರೀ ಅಂದಾನೆಪ್ಪ ವiಹಾರುದ್ರಪ್ಪ ಅಸುಂಡಿ, ಶ್ರೀ ಬಸವರಾಜ ಚನ್ನಬಸಪ್ಪ ಅಲೂರು, ಶ್ರೀ ಶಿವಮೂರ್ತೆಪ್ಪ ನಾಗಪ್ಪ ಕಟ್ಟಿಮನಿ, ಶ್ರೀ ಮಹದೇವಪ್ಪ ಹಾಲಪ್ಪ ಗವಳಿ ಶ್ರೀ ಮಹಾಲಿಂಗಪ್ಪ ಬಸಪ್ಪ ಬೇತೂರು, ಶ್ರೀ ವೀರಣ್ಣ ಚನ್ನಬಸಪ್ಪ ಜಂಬಗಿ, ಶ್ರೀ ಗೂಳಪ್ಪ ಶಿವಪ್ಪ ನರಸಗೂಂಡರ ಇವರುಗಳ ನಂತರ ಸನ್ 2006-07 ರಲ್ಲಿ ಬ್ಯಾಂಕಿನ ಅಧ್ಯಕರಾದ ಶ್ರೀ ಚನ್ನವೀರಪ್ಪ ರುದ್ರಪ್ಪ ಅಸುಂಡಿ ಇವರ ಅಧ್ಯಕ್ಷತೆಯಲ್ಲಿ ಬ್ಯಾಂಕು ಸಂಪೂರ್ಣ ಗಣಕೀಕೃತಗೂಂಡಿತು.
ಎರಡನೇ ಬಾರಿಗೆ ಹೊಸ ಕಟ್ಟಡ ನಿರ್ಮಾಣದ ಅಡಿಗಲ್ಲು ಸಮಾರಂಭ ದಿನಂತರ ಎರಡನೇ ಬಾರಿಗೆ ಬ್ಯಾಂಕಿನ ಕಟ್ಟಡ ಪುನ: ನವೀಕೃತಗೂಂಡಿತು ಅಂದಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾದ ಶ್ರೀ ಪರಮೇಶ್ವರಪ್ಪ ಮಲ್ಲಪ್ಪ ಗವಳಿ, ಉಪಾಧ್ಯಕ್ಷರಾದ ಶ್ರೀ ಗುರುರಾಜ ಶಿವಪ್ಪ ತಿಳವಳ್ಳಿ ಆಡಳಿತ ಮಂಡಳಿ ಸದಸ್ಯರನ್ನಳಗೂಂಡು ಹಾಗೂ ಅಂದಿನ ರಾಣೇಬೇನ್ನೂರಿನ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಜಿ ಶಿವಣ್ಣ ಇವರ ಅಮೃತ ಹಸ್ತದಿಂದ ದಿನಾಂಕ 15-02-2010 ನೇ ಸೋಮವಾರ ನವೀಕೃತ ಕಟ್ಟಡಕ್ಕೆ ಶಂಕು ಸ್ಥಾಪನೆ ನೇರವೇರಿಸಲ್ಪಟ್ಟಿತು.
ಸತತ ಕಟ್ಟಡದ ಮೇಲ್ವಿಚಾರಣೆಯಿಂದ 1 ವರ್ಷ 6 ತಿಂಗಳ ಒಳಗೆ ಬ್ಯಾಂಕಿನ ನವೀಕೃತ ನೂತನ ಕಟ್ಟಡ ದಿನಾಂಕ 28-08-2011 ರ ರವಿವಾರ ಬೆಳಿಗ್ಗೆ 11-00 ಉದ್ಘಾಟನೆಗೊಂಡಿತು. ದಿನಾಂಕ 28-08-2011 ರಂದು ಎರಡನೇ ಬಾರಿಗೆ ಹೊಸ ಕಟ್ಟಡ ಉದ್ಘಾಟನೆಯಾದ ದಿನ.
ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಷ || ಬ್ರ || ಶ್ರೀ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳು ಹಿರೇಕಲ್ಮಠ, ಹೊನ್ನಾಳಿ, ಇವರು ವಹಿಸಿಕೊಂಡರು ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಸಿ ಎಂ ಉದಾಸಿ ಲೋಕೋಪಯೋಗಿ ಸಚಿವರು, ಸನ್ಮಾನ್ಯ ಶ್ರೀ. ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವರು, ಶ್ರೀ. ಲಕ್ಷಣ ಸವದಿ ಸಹಕಾರ ಸಚಿವರು, ಶ್ರೀ. ಜಿ ಶಿವಣ್ಣ ಜನಪ್ರಿಯ ಶಾಸಕರು ರಾಣೇಬೇನ್ನೂರು, ಶ್ರೀ. ಶಿವಕುಮಾರ ಉದಾಸಿ ಲೋಕಸಭಾ ಸದಸ್ಯರು ಹಾವೇರಿ ಶ್ರೀ. ಶಿವರಾಜ ಸಜ್ಜನ್ ವಿಧಾನ ಪರಿಷತ್ ಸದಸ್ಯರು, ಶ್ರೀ. ಮಂಜುನಾಥ ಓಲೇಕಾರ ಜಿಲ್ಲಾ ಪಂಚಾಯತ ಅಧ್ಯಕ್ಷರು, ಶ್ರೀ. ಶೇಖಪ್ಪ ಬಸಪ್ಪ ಹೊಸಗೌಡರ, ನಗರಸಭಾ ಅಧ್ಯಕ್ಷರು ರಾಣೇಬೇನ್ನೂರು, ಶ್ರೀ, ವಿಶ್ವನಾಥ ಶಂಕರಗೌಡ ಪಾಟೀಲ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ ರಾಣೇಬೆನ್ನೂರು, ಶ್ರೀ. ರಾಮಣ್ಣ ಕೋಲಕಾರ ಮಾಜಿ ಅಧ್ಯಕ್ಷರು ನಗರಸಭೆ ರಾಣೇಬೆನ್ನೂರು ಹಾಗೂ ಗಣ್ಯರು ಆಗಮಿಸಿದ್ದರು.
ವಿಶೇಷ ಆಹ್ವಾನಿತರಾದ ಶ್ರೀ. ಎಂ ಡಿ ಮಠಪತಿ ಜಂಟಿ ನಿಬಂಧಕರು ಸ.ಸಂ. ಬೆಳಗಾವಿ, ಶ್ರೀ. ಎನ್ ರಾಜಣ್ಣ ಜಂಟಿ ನಿಬಂಧಕರು ಪಟ್ಟಣ ಬ್ಯಾಂಕುಗಳ ವಿಭಾಗ ಬೆಂಗಳೂರು, ಶ್ರೀ. ಪಿ ಎಂ ನಾಗಶಯನ ಉಪ ನಿಬಂಧಕರು ಸ. ಸಂ ಹಾವೇರಿ ಜಿಲ್ಲಾ, ಶ್ರೀ. ಎಂ ರವಿ ಉಪ ನಿರ್ಧೆಶಕರು, ಸ.ಸಂ.ಲೆ.ಪ. ಹಾವೇರಿ ಜಿಲ್ಲೆ, ಶ್ರೀ. ಕೆ. ವಿ ಶಿಂಗೋಟಿ ಸಹಾಯಕ ನಿಬಂಧಕರು ಸ.ಸಂ.ಹಾವೇರಿ ವಿಭಾಗ
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ. ಪರಮೇಶ್ವರಪ್ಪ ಎಂ ಗವಳಿ - ಅಧ್ಯಕ್ಷರು, ಶ್ರೀ. ಬಸವೇಶ್ವರ ಅರ್ಬನ ಕೋ-ಆಪರೇಟಿವ್ ಬ್ಯಾಂಕ್ ಲಿ., ರಾಣೇಬೆನ್ನೂರು, ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀ. ಗುರುರಾಜ ಎಸ್ ತಿಳವಳ್ಳಿ - ಉಪಾಧ್ಯಕ್ಷರು, ನಿರ್ದೇಶಕರುಗಳಾದ - ಗೂಳಪ್ಪ ಎಸ್ ನರಸಗೂಂಡರ, ಶ್ರೀ. ಚನ್ನವೀರಪ್ಪ ರುದ್ರಪ್ಪ ಅಸುಂಡಿ, ಶ್ರೀ. ಜಯಣ್ಣ (ಸುಜಿತ್) ಜಂಬಗಿ, ಶ್ರೀ. ರಮೇಶ ಎಂ ಪಟ್ಟಣಶೆಟ್ಟಿ, ಶ್ರೀ. ಅಚ್ಯುತ್‍ರಾವ ಕಟ್ಟಿ, ಶ್ರೀ. ಈಶ್ವರ ಜಿ ಹಾವನೂರು, ಶ್ರೀ. ಶಿವಪ್ಪ ಎಸ್ ರೊಡ್ಡನವರ, ಶ್ರೀ. ಬಸಪ್ಪ ಬಿ ಬೇತೂರು, ಶ್ರೀಮತಿ. ಗಾಯತ್ರಿ ಸಿ ಕುರುವತ್ತಿ, ವ್ಯವಸ್ಥಾಪಕರಾದ ಶ್ರೀ. ಬಸವರಾಜ ಕೆ ಪೂಜಾರ ಹಾಜರಿದ್ದರು.
ಈ ಕೆಳಗಿನ ಮಹನೀಯರು ಬ್ಯಾಂಕಿನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿ ಬ್ಯಾಂಕಿನ ಸರ್ವತೋಮುಖ ಅಭಿವೃಧ್ದಿಗೆ ಕಾರಣೀಕರ್ತರಾಗಿರುತ್ತಾರೆ.